ಹೇಗೆ ಮರೆಯಲಿ ಹೇಳು ತಂಗಿ ನಿನ್ನ !!!!!!
ಮರೆತಿಲ್ಲ ತಂಗಿ ...ನನಗೆ ಹುಷಾರಿಲ್ಲದಾಗ ,
ನೀ ಕೋಣೆ ಯಲ್ಲಿ ಅತ್ತಿದ್ದು ..ಮರುಗಿದ್ದು ... !!
ಮರೆತಿಲ್ಲ ತಂಗಿ ..ನಾವಿಬ್ಬರು ಹೋಗುವಾಗ
ನಮ್ಮ ನೋಡಿದ " ಯಮುನಕ್ಕ " ತನ್ನ ಮಕ್ಕಳಿಗೆ
ತೋರಿಸಿ ಇದ್ದರೆ ಹೀಗೆ ಇರಿ ಎಂದು ತನ್ನ ಮಕ್ಕಳಿಗೆ ಗದರಿದ್ದು !!
ಮರೆತಿಲ್ಲ ತಂಗಿ ..ನಿನ್ನ ಬೆನ್ನ ಮೇಲೆ ಕುಳಿತು ನಾ ನಮ್ಮ
ಗದ್ದೆ ..ತೋಟ ಸುತ್ತಿದ್ದು !!!
ಮರೆತಿಲ್ಲ ತಂಗಿ ...ಪರೀಕ್ಷೆಯ ಸಮಯದಲ್ಲಿ
ನಾ ಆಟವಾಡಲು ಹೋದಾಗ ಅಷ್ಟು ಜನ
ಹುಡುಗರ ಮದ್ಯೆ ಇದ್ದ ನನ್ನ ನೀ " ನಾಚಿಕೆ ಇಂದ " ಕೂಗಿದ್ದು ..
ಮರೆತಿಲ್ಲ ತಂಗಿ ... ಅಮ್ಮ ಮಾಡಿದ " ಉಪ್ಪಿಟ್ಟಿ " ನಂತೆ ಇದ್ದ ನಿನ್ನ ಮುಖ ..
ನಾ ಉರು ಬಿಡುವ ಮುನ್ನ ದಿನ " ಕಪ್ಪಿಟಿದ್ದು"..
ಮರೆತಿಲ್ಲ ತಂಗಿ ...ನಾ ಪರೀಕ್ಷೆಯಲ್ಲಿ " ನಪಾಸದೆ" ಎಂಬ
ಕಾರಣಕ್ಕೆ ನೀ ಪಾಸಾದ ಕುಶಿಯನ್ನು ತೋರ್ಪಡಿಸದೆ
ನಿನ್ನ ಮನದಲ್ಲಿ ಅದುಮಿಟಿದ್ದು...
ಮರೆತಿಲ್ಲ ತಂಗಿ ...ನಾ ಕೆಲಸ ಆರಿಸಿ ಬೇರೆ ಊರಿಗೆ
ಹೊರಟಾಗ ಅಮ್ಮನ ಕೈಲ್ಲಿ ಕೊಟ್ಟ ಹಣ ..
ಇವಾಗಲು ನನ್ನ ನಿನ್ನ ನಡುವಿನ ಯಾವ ಜಗಳವನ್ನು ಬಗೆಹರಿಸಲು ನಿನ್ನಲ್ಲಿರುವ
ಆಯುಧ ನಿನ್ನ ಮಗ " ಕೀರ್ತನ "
ಎಂಥ ಸಿಟ್ಟನ್ನು ಕೆಡವಿ ಬಿಡ ಬಲ್ಲದು ಅವನ ಮಾತಿನ ಪದಗಳ " ನರ್ತನ "
ಒಂದು ದಿನ ದೇವರಲ್ಲಿ ಕೇಳಿದೆ ಇಸ್ಟೆಲ್ಲ ಕೊಟ್ಟ ತಂಗಿಯನ್ನು ದಿನಾ ನೆನೆಯುವಂತೆ ಮಾಡು ಅಣ್ಣ !!
ಸರಿ ಎಂದ ಅತ ನನ್ನ ಮಗನಿಗೆ ಕೊಟ್ಟಿದಾನೆ ನಿನ್ನಂತೆ " ದೊಡ್ಡ - ದೊಡ್ಡ" ಕಣ್ಣ !!!
ಹಾಗು ನಿನ್ನಂತೆ ಬಿಳಿಯ ಬಣ್ಣ !!!
Tuesday, November 24, 2009
Subscribe to:
Post Comments (Atom)
boss, elliddira?
ReplyDelete